ಹರಿವಾಣಿ ಜಾಲತಾಣಕ್ಕೆ ಸ್ವಾಗತ

ತುಳುನಾಡಿನ ಪುಣ್ಯಭೂಮಿಗಳಲ್ಲಿ ಮಹತ್ವದ ಸ್ಥಾನಪಡೆದ ವಿಜಯನಗರಾದಿ ಅರಸರುಗಳ ಪ್ರೀತಿಪಾತ್ರ ನಗರಿಗಳಲ್ಲಿ ಅಚ್ಚಳಿಯದ ಹೆಸರು ವಿಟ್ಲಸೀಮೆ, ಇಂತಹ ಸೀಮೆಯಲ್ಲಿ ಸಾಮಾಜಿಕ ಮತ್ತು ಸಾಂಸ್ಕ್ರತಿಕ ಕ್ರಾಂತಿಯನ್ನು ಮಾಡಹೊರಟಿರುವ ಕುಂಡಡ್ಕ ಜನತೆಯ ಪ್ರತಿಬಿಂಬವಾಗಿರುವ ಜಾಲತಾಣ ಹರಿವಾಣಿ.ಕಾಂ ಗೆ ಸ್ವಾಗತ. ‘ಪರಶುರಾಮ ಸೃಷ್ಟಿ ಎನ್ನಲಾಗುವ ವಿಟ್ಲಕುಳ- ವಿಷ್ಣುನಗರಕ್ಕೆ ಹರಿವಾಣಿ.ಕಾಮ್  ಸಾಂಸ್ಕೃತಿಕ  ಹಾಗೂ  ಆಧ್ಯಾತ್ಮಿಕ ರಾಯಭಾರಿಯಾಗಿದೆ. ಕಲ್ಪವೃಕ್ಷ ಕಾಮಧೇನುಗಳ ನಾಡು, ಪರಶುರಾಮ ಸೃಷ್ಟಿಯ ಬೀಡು, ನದಿ ಸರೋವರಗಳ ಉಗಮಸ್ಥಾನ ಧಾರ್ಮಿಕ ನಂಬಿಕೆಗಳ, ದೈವದೇವರ ಆವಾಸಸ್ಥಾನವಾಗಿರುವ ಕರಾವಳಿಯು ಕುಂಡಡ್ಕದೊಂದಿಗಿನ ಪಯಣಕ್ಕೆ ಸಿದ್ದವಾಗಿದೆ. ಈ ಪ್ರಯಾಣ  ನದಿಗಳ  ಪುನಶ್ಚೇತನ,  ಆಧ್ಯಾತ್ಮಿಕ ಆನಂದದ  ಶಿಖರಕ್ಕೇರುವ  ಅಭಿಯಾನವಾಗಲಿದೆ.  ಯಾವುದೇ  ಅಭಿಯಾನಗಳ  ಯಶಸ್ಸು  ಅದನ್ನು  ಯೋಜಿಸುವ  ಜನರ  ಹೃದಯದಲ್ಲಿರುತ್ತದೆ ಎನ್ನುವ ಭಾವನೆ ನಮ್ಮದು. ಹಾಗೂ ಆ ಯಶಸ್ಸಿನ ದಾರಿಯ ಪಯಣಕ್ಕೆ ಭಗವಂತನ ನಾಮ ಸಂಕೀರ್ತನೆಯೊಂದೇ ದಾರಿದೀಪ.

ಜನರ ಜೀವನವನ್ನು ಸುಧಾರಿಸುವುದು ಅದರ ಮೂಲಕ ಸಮಾಜದ ಮತ್ತು ದೇಶದ ಅಭಿವೃದ್ಧಿಗೆ ನೆರವಾಗುವುದು ನಮ್ಮ ಆಶಯ. ಈ ದಿಶೆಯಲ್ಲಿ ನಾವು ಬಹಳ ದೂರ ಬಂದಾಗಿದೆ, ಆದರೆ ಸಾಗಬೇಕಾದ ದೂರ ಬಹಳಷ್ಟಿದೆ. ಈ ಎಲ್ಲಾ ಬದಲಾವಣೆಗಳ, ಅಭಿವ್ರದ್ದಿಗಳ ಕೈಗನ್ನಡಿಯಾಗಿ ಶ್ರೀವಾಣಿ ಫೌಂಡೇಶನ್ ಇರಲಿದೆ ಹಾಗೂ ಈ ಬದಲಾವಣೆಗಳ ಹಿಂದಿನ ಧಿ: ಶಕ್ತಿಯಾಗಿ ಕಾರ್ಯನಿರ್ವಹಿಸಲಿದೆ.

ಶ್ರೀ ಕುಂಡಡ್ಕ ವಿಷ್ಣುಮೂರ್ತಿ ದೇವಸ್ಥಾನ

ಶ್ರೀ ಕುಂಡಡ್ಕ ವಿಷ್ಣುಮೂರ್ತಿ ದೇವಸ್ಥಾನ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನಲ್ಲಿದೆ. ಶ್ರೀ ವಿಷ್ಣುಮೂರ್ತಿ, ಶ್ರೀ ಆದಿಮಾಯೆ, ಶ್ರೀ ಮಹಾಗಣಪತಿ ಶ್ರೀ ಧರ್ಮ ಶಾಸ್ತಾರ, ಶ್ರೀ ನಾಗರಾಜ ಮತ್ತು ಪರಿವಾರ ದೇವರುಗಳು ಇಲ್ಲಿ ಆರಾಧಿಸಲ್ಪಡುತ್ತಿದ್ದಾರೆ.

ದೇವಸ್ಥಾನದ ದಿನಚರಿ

ಆದಿಸ್ಥಳ ಬದಿಕೆರೆ ಸಾನಿಧ್ಯ

ಆದಿಸ್ಥಳ ಬದಿಕೆರೆಯಲ್ಲಿ ಜಲರೂಪಿ ವಿಷ್ಣುಮೂರ್ತಿ ದೇವರ ಮೂಲಸ್ಥಾನವಿದೆ. ಇಲ್ಲಿಯ ಕುಂಡದಲ್ಲಿ ಶ್ರೀ ದೇವರ ಬಿಂಬವು ಮೊದಲು ಸಿಕ್ಕಿದ್ದು ಎಂಬ ಪ್ರತೀತಿಯಿದೆ. ಇಲ್ಲಿ ಶ್ರೀ ದೇವರ ಜೊತೆಗೆ, ರಕ್ತೇಶ್ವರಿ, ನಾಗರಾಜ ಜುಮಾದಿ ದೈವದೇವರುಗಳ ಸಾನಿಧ್ಯವೂ ಇದೆ.

ಇತಿಹಾಸ ಓದಿ

ಶ್ರೀ ಮಲರಾಯ ಮೂವರ ದೈವಂಗಳ ದೈವಸ್ಥಾನ

ವಿಟ್ಲಮುಡ್ನೂರು ಗ್ರಾಮದ ಮಾಡತ್ತಡ್ಕ ಶಿಬರಿಕಲ್ಲು ಮಾಡ ಕಲ್ಲಮೇಲಿನಲ್ಲಿ ಮೂವರ್ ದೈವಂಗಳ ದೈವಸ್ಥಾನವಿದ್ದು, ದೈವಸ್ಥಾನದ ಉತ್ತರದಿಕ್ಕಿನಲ್ಲಿ. ಮಲರಾಯ ದೈವದ ದೈವಸ್ಥಾನವಿದೆ.ಕುಳ ಗ್ರಾಮದ ಜೈನರ ಕೋಡಿಯಿಂದ ದೈವದ ಭಂಡಾರವು ಕಲ್ಲಮೇಲೆ ಇರುವ ಶಿಬರಿಕಲ್ಲ ಮಾಡಕ್ಕೆ ಹೋಗಿ ಮೂವರ್ ದೈವಂಗಳಿಗೆ ನೇಮೋತ್ಸವವು ಜರಗುವುದು. ಈ ಮೂವರ್ ದೈವಂಗಳ ಭಂಡಾರ ಸ್ಥಾನವಿರುವುದು ಮಾತ್ರ ಕುಳ ಗ್ರಾಮ ಜೈನರಕೋಡಿ ಎಂಬಲ್ಲಿ.

ದೇವಸ್ಥಾನದ ದಿನಚರಿ
ನಮ್ಮ ಪಯಣ

ಶ್ರೀ ವಾಣಿ ಫೌಂಡೇಶನ್

ವಿಟ್ಲಕುಳ- ವಿಷ್ಣುನಗರದ ಸರ್ವಾಂಗೀಣ ಅಭಿವ್ರದ್ದಿಯನ್ನು ತನ್ನ ಮೂಲಉದ್ದಿಶ್ಯವನ್ನಾಗಿಟ್ಟುಕೊಂಡು ಶ್ರೀವಾಣಿ ಫೌಂಡೇಶನ್ ಪ್ರಾರಂಭವಾಯಿತು. ಜನರ ಧಾರ್ಮಿಕ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕ್ರತಿಕ ಜೀವನಸ್ಥರವನ್ನು ಅಭಿವ್ರದ್ದಿಪಡಿಸುವುದು ಮತ್ತು ಆ ಮೂಲಕ ಸಮಾಜದ ಏಳ್ಗೆಗೆ ಶ್ರಮಿಸುವುದು ಮತ್ತು ಅಲ್ಲಿರುವ ತೊಂದರೆಗಳನ್ನು ನಿವಾರಿಸುವುದು ಇದರ ಗುರಿ.

ನಮ್ಮ ಧ್ಯೇಯ